Aj creator

Aj creator ಕೆಟ್ಟವರಿಗೂ ಒಳ್ಳೇದೆ ಬಯಸೋಣ
ತಂದೆ ತಾಯಿ ಆಶೀರ್ವಾದ
RCB forever �
ಜೈ ಕರ್ನಾಟಕ

ವಿಜಯಪುರ: ದೇವರ ಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮದಲ್ಲಿ ರೈತ ಮುಖಂಡರಾದ ಹಣಮಂತ್ರಾಯ ಮುಳಜಿ ಅವರ ಅಪೇಕ್ಷೆಯಂತೆ ಮತ್ತು ಅವರ ಆಸೆಯಂತೆ ಗ್ರಾಮ...
05/07/2026

ವಿಜಯಪುರ: ದೇವರ ಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮದಲ್ಲಿ ರೈತ ಮುಖಂಡರಾದ ಹಣಮಂತ್ರಾಯ ಮುಳಜಿ ಅವರ ಅಪೇಕ್ಷೆಯಂತೆ ಮತ್ತು ಅವರ ಆಸೆಯಂತೆ ಗ್ರಾಮದ ಅಶೋಕಗೌಡ ಪಾಟೀಲ ಅವರ ಜಮೀನಿನಲ್ಲಿ ರೈತ ಮಲ್ಲಪ್ಪ ರೊಟ್ಟಿ ಅವರು ಸತತ 11 ಗಂಟೆಯಲ್ಲಿ 18 ಎಕರೆ ಜಮೀನು ಬಿತ್ತನೆ ಮಾಡುವುದರ ಮೂಲಕ ಸಾಧನೆ ಮಾಡಿದ್ದಾರೆ.

ರೈತನ ಸಾಧನೆಗೆ ಸಂತಸಗೊಂಡ ಊರಿನ ರೈತರು ರೈತ ದಂಪತಿಯನ್ನು ಚಕ್ಕಡಿಬಂಡಿಯಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದರು.

ರೈತರಲ್ಲಿ ಹೊಸ ಹುರುಪು

ಪ್ರಗತಿ ಪರ ರೈತ, ಪಿಕೆಪಿಎಸ್ ಅಧ್ಯಕ್ಷರಾದ ನಾಗಣ್ಣ ಮುಳಜಿ ಅವರು ರೈತ ದಂಪತಿಯನ್ನು ತಮ್ಮ ಮನೆಗೆ ಕರಿಸಿ ಬಟ್ಟೆ ಆಹೇರಿ ಮಾಡಿ ಸತ್ಕರಿಸಿದರು. ಈ ಬೇಳೆ ಮಾತನಾಡಿದ ಅವರು, ರೈತನ ಸಾಧನೆಯಿಂದ ರೈತರಲ್ಲಿ ಹೊಸ ಹುರುಪು ಮೂಡಿಸಿದೆ. ಒಕ್ಕಲುತನದಿಂದ ದೂರ ಉಳಿಯುತ್ತಿರುವ ಇಂದಿನ ದಿನದಲ್ಲಿ ಯುವ ಸಮುದಾಯಕ್ಕೆ ಇದೊಂದು ಪ್ರೆರಣೆಯಾಗಿದೆ ಎಂದರು

ಈ ವೇಳೆ ಊರಿನ ರೈತರಾದ ನಿಲಕಂಠ ಬೆನಕನಹಳ್ಳಿ, ಬಸವರಾಜ ಹೊಸಮನಿ, ಮಹಾಂತೇಶ ಉಡಗಿ, ಸಿಂಧೂರ ಪೂಜಾರಿ, ಲಗಮಣ್ಣ ಪೂಜಾರಿ, ಹಣಮಂತ ಕಂಬಾರ, ಭೀಮಾಶಂಕರ ಪ್ಯಾಟಿ, ದೇವಾನಂದ್ ಬಾಗಲಕೋಟ, ಗಂಗಪ್ಪ ಇಮ್ಮನ, ಮಹಾದೇವ ಕಡ್ಲೇವಾಡ, ಸಂತೋಷ ಹಾದಿಮನಿ, ಬಾಬು ಖೋಜೀಗಿರ, ಜಟ್ಟೇಪ್ಪ ಯಳಕೋಟಿ, ಸಿದ್ದು ಕಡ್ಲೇವಾಡ, ದಾನಪ್ಪಗೌಡ ಪಾಟೀಲ, ಮಂಜುನಾಥ ಬಾಗಲಕೋಟ, ಶಶಿಕಾಂತ ಚಕ್ಕಡಿ, ದೇವಾನಂದ ಉಡಗಿ, ಸಂತೋಷ ಸಿಂದಗಿ ಸೇರಿದಂತೆ ಹಲವರು ರೈತರು ಉಪಸ್ಥಿತರಿದ್ದರು

04/07/2026

ಇಂದಿರಾನಗರ ಇಂದಿರಾ ಕ್ಯಾಂಟಿನ್
03/07/2026

ಇಂದಿರಾನಗರ ಇಂದಿರಾ ಕ್ಯಾಂಟಿನ್

ಈ ಬಿಲ್ಡರ್ ಲೊಕೇಶನ್ ಗೊತ್ತಿದ್ದರೆ ಕಮೆಂಟ್ ಮಾಡಿ
30/06/2026

ಈ ಬಿಲ್ಡರ್ ಲೊಕೇಶನ್ ಗೊತ್ತಿದ್ದರೆ ಕಮೆಂಟ್ ಮಾಡಿ

ಬರ್ರಿ ಎಲ್ಲರು ಊಟ ಮಾಡುನ 🤤        #ಊಟ
29/06/2026

ಬರ್ರಿ ಎಲ್ಲರು ಊಟ ಮಾಡುನ 🤤
#ಊಟ

Good night
28/06/2026

Good night

ಬೆಂಗಳೂರು::ಸ್ಯಾಂಡಲ್‌ವುಡ್ ಬಾದ್‌ಷಾ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಅವರಿಗೆ ವಾಹನಗಳ ಬಗ್ಗೆ ಇರುವ ಕ್ರೇಜ್ ಎಲ್ಲರಿಗೂ ...
27/06/2026

ಬೆಂಗಳೂರು::ಸ್ಯಾಂಡಲ್‌ವುಡ್ ಬಾದ್‌ಷಾ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಅವರಿಗೆ ವಾಹನಗಳ ಬಗ್ಗೆ ಇರುವ ಕ್ರೇಜ್ ಎಲ್ಲರಿಗೂ ಗೊತ್ತಿರೋದೇ. ಆದರೆ ಈಗ ಅವರ ಗ್ಯಾರೇಜ್ ಸೇರಿರುವ ಹೊಸ ವಾಹನ ಇಡೀ ಚಿತ್ರರಂಗವೇ ಹುಬ್ಬೇರಿಸುವಂತೆ ಮಾಡಿದೆ ನಟ ಸುದೀಪ್ ಅವರಿಗಾಗಿ ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾದ ಅತ್ಯಾಧುನಿಕ ಹಾಗೂ ಐಷಾರಾಮಿ ಕ್ಯಾರವನ್ (Caravan) ಒಂದು ಸಿದ್ಧವಾಗಿ ಬಂದಿದ್ದು, ಸದ್ಯ ಸ್ಯಾಂಡಲ್‌ವುಡ್‌ನಲ್ಲೇ ಅತ್ಯಂತ ದುಬಾರಿ ಬೆಲೆಯ ಕ್ಯಾರವನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ

ಬರೋಬ್ಬರಿ ₹6.5 ಕೋಟಿ ಏನಿದರ ವಿಶೇಷತೆ?

ಮಹಾರಾಷ್ಟ್ರದ ಪುಣೆಯಲ್ಲಿ ರೆಡಿಯಾಗಿರುವ ಈ ಹೈ-ಫೈ ಕ್ಯಾರವನ್‌ನ ಒಟ್ಟು ಬೆಲೆ ಬರೋಬ್ಬರಿ ಸುಮಾರು 6.5 ಕೋಟಿ ರೂಪಾಯಿ ಭಾರತದ ಖ್ಯಾತ ಕಾರ್ ಡಿಸೈನರ್ ದಿಲೀಪ್ ಛಾಬ್ರಿಯಾ ಅವರ ಮಾಲೀಕತ್ವದ 'DC2' ಸಂಸ್ಥೆಯು ಸುದೀಪ್ ಅವರ ಇಷ್ಟಕ್ಕೆ ತಕ್ಕಂತೆ ಇದನ್ನು ಕಸ್ಟಮೈಸ್ ಮಾಡಿಕೊಟ್ಟಿದೆ. ಇದು ಬರೀ ಕ್ಯಾರವನ್ ಅಲ್ಲ, ಒಳಗಡೆ ಜಿಮ್ ಸೌಲಭ್ಯವನ್ನೂ ಒಳಗೊಂಡಿರುವ ಜಿಮ್ ಮಾಡ್ಯುಲರ್ ಕ್ಯಾರವನ್ ಆಗಿದೆ.

ಖಡಕ್ ಸಿಂಬಲ್: ಈ ಐಷಾರಾಮಿ ಕ್ಯಾರವನ್‌ನ ಮತ್ತೊಂದು ಹೈಲೈಟ್ ಅಂದರೆ, ಇದರ ಮುಂಭಾಗದಲ್ಲಿ ಕಿಚ್ಚ ಸುದೀಪ್ ಅವರ ಹೆಸರನ್ನು ಸೂಚಿಸುವ 'K' (ಕಿಚ್ಚ) ಎಂಬ ವಿಶೇಷ ಸಿಂಬಲ್ ಅನ್ನು ಡಿಸೈನ್ ಮಾಡಲಾಗಿದೆ. ಸುದೀಪ್ ಅವರು ತಮ್ಮ ಕಾರುಗಳ ಮೇಲೂ ಇದೇ ರೀತಿಯ ಲೋಗೋ ಹೊಂದಿದ್ದು, ಈಗ ಕ್ಯಾರವನ್ ಮೇಲೂ ಅದೇ 'K' ಬ್ರ್ಯಾಂಡ್ ರಾರಾಜಿಸುತ್ತಿದೆ

ಬಿಲ್ಲ ರಂಗ ಬಾಷಾ' ಶೂಟಿಂಗ್ ಅಡ್ಡಾಗೆ ಬಂತು ಕಾಸ್ಟ್ಲಿ ವಾಹನ

ಸುದೀಪ್ ಅಭಿಮಾನಿಗಳು ಬಹುಕಾಲದಿಂದ ಕಾಯುತ್ತಿದ್ದ ಬಹುನಿರೀಕ್ಷಿತ ಬಿಲ್ಲ ರಂಗ ಬಾಷಾ ಸಿನಿಮಾದ ಶೂಟಿಂಗ್ ಜೂನ್ 26ರಿಂದ ಭರ್ಜರಿಯಾಗಿ ಕಿಕ್ ಸ್ಟಾರ್ಟ್ ಆಗಿದೆ. ಸುಮಾರು ಒಂದು ವರ್ಷದ ದೀರ್ಘ ಬಿಡುವಿನ ಬಳಿಕ ಈ ಪ್ಯಾನ್ ಇಂಡಿಯಾ ಚಿತ್ರದ ಎರಡನೇ ಹಂತದ ಚಿತ್ರೀಕರಣ ಆರಂಭಗೊಂಡಿದೆ.

ಬೆಂಗಳೂರು ಜಿಲ್ಲೆಯ ಕನಕಪುರದ ಬಳಿ ಬೃಹತ್ ಆದ ಸೆಟ್ ಒಂದನ್ನು ನಿರ್ಮಿಸಲಾಗಿದ್ದು, ಅಲ್ಲಿ ಈ ಸಿನಿಮಾದ ಪ್ರಮುಖ ಆಯಕ್ಷನ್ ಹಾಗೂ ಪ್ರಮುಖ ದೃಶ್ಯಗಳನ್ನು ಶೂಟ್ ಮಾಡಲಾಗುತ್ತಿದೆ. ಇದೇ ಶೂಟಿಂಗ್ ಅಡ್ಡಾಗೆ ಸುದೀಪ್ ಅವರ ಈ ₹6.5 ಕೋಟಿಯ ಹೊಸ ಕ್ಯಾರವನ್ ಭರ್ಜರಿಯಾಗಿ ಎಂಟ್ರಿ ಕೊಟ್ಟಿದೆ. ಸೆಟ್‌ನಲ್ಲಿ ನಿಂತಿರುವ ಈ ರಾಜಗಾಂಭೀರ್ಯದ ವಾಹನದ ಲುಕ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಗಾಂಧಿನಗರದ ಅಂಗಳದಲ್ಲಿ ಭಾರಿ ಸೌಂಡ್ ಮಾಡುತ್ತಿದೆ.

ಮತಾಂತರ ಮತ್ತು ಮೀಸಲಾತಿ ಪ್ರಯೋಜನಗಳ ಕುರಿತು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇತರ ಹಿಂದುಳಿದ ವರ್ಗಗಳಿಂದ ಇಸ್ಲಾಂ ಧರ್ಮಕ್ಕೆ ಮತಾಂ...
27/06/2026

ಮತಾಂತರ ಮತ್ತು ಮೀಸಲಾತಿ ಪ್ರಯೋಜನಗಳ ಕುರಿತು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇತರ ಹಿಂದುಳಿದ ವರ್ಗಗಳಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡವರಿಗೆ "ಹಿಂದುಳಿದ ವರ್ಗದ ಮುಸ್ಲಿಂ (BCM)" ವರ್ಗದಡಿ ಮೀಸಲಾತಿ ಸೌಲಭ್ಯ ನೀಡುವಂತೆ ತಮಿಳುನಾಡು ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಅಸಂವಿಧಾನಿಕವೆಂದು ಘೋಷಿಸಿ ಸಂಪೂರ್ಣವಾಗಿ ರದ್ದುಪಡಿಸಿದೆ.

ವಿವಾದಾತ್ಮಕ ಸರ್ಕಾರದ ಆದೇಶ ಏನು?

2024ರ ಮಾರ್ಚ್ 9ರಂದು ತಮಿಳುನಾಡು ಸರ್ಕಾರ ವಿಶೇಷ ಆದೇಶವನ್ನು ಹೊರಡಿಸಿತ್ತು. ಇದರ ಪ್ರಕಾರ, ಹಿಂದುಳಿದ ವರ್ಗ (BC), ಅತಿ ಹಿಂದುಳಿದ ವರ್ಗ (MBC), ಡಿನೋಟಿಫೈಡ್ ಸಮುದಾಯಗಳು (DNC) ಹಾಗೂ ಪರಿಶಿಷ್ಟ ಜಾತಿ (SC)ಗಳಿಗೆ ಸೇರಿದವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರೂ ಅವರನ್ನು 'BC ಮುಸ್ಲಿಂ' (BCM) ವರ್ಗದಡಿ ಮೀಸಲಾತಿ ಸೌಲಭ್ಯ ಪಡೆಯಲು ಅರ್ಹರೆಂದು ಪರಿಗಣಿಸಲಾಗುತ್ತಿತ್ತು. ಜೊತೆಗೆ ಸರ್ಕಾರ ಗುರುತಿಸಿದ ಏಳು ವಿಶೇಷ BC ಮುಸ್ಲಿಂ ವರ್ಗಗಳಲ್ಲಿ ಒಂದರ ಸದಸ್ಯರಾಗಿ ಗುರುತಿಸಿ ಸಮುದಾಯ ಪ್ರಮಾಣಪತ್ರ ನೀಡಲು ಸಹ ಅನುಮತಿ ನೀಡಲಾಗಿತ್ತು.

ಹೈಕೋರ್ಟ್ ಮಹತ್ವದ ಅಭಿಪ್ರಾಯಗಳು

ಮತಾಂತರಗೊಂಡ ವ್ಯಕ್ತಿ BCM ಹಕ್ಕು ಪಡೆಯಲು ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಸ್ಪಷ್ಟಪಡಿಸಿದೆ. "ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿ ಕೇವಲ ಮುಸ್ಲಿಂ ಮಾತ್ರ; ಅವರು ಯಾವುದೇ ವಿಶೇಷ ಹಿಂದುಳಿದ ವರ್ಗಕ್ಕೆ ಸೇರಿಲ್ಲ" ಎಂದು ನ್ಯಾಯಾಲಯ ತಿಳಿಸಿದೆ. ರಾಜ್ಯ ಸರ್ಕಾರ ಸೂಚಿಸಿದ ಏಳು ವಿಶೇಷ ಹಿಂದುಳಿದ ಮುಸ್ಲಿಂ ವರ್ಗಗಳಾದ ಅನ್ಸಾರ್, ದಖಾನಿ ಮುಸ್ಲಿಂ, ದುಬೆಕುಲ, ಲಬ್ಬಾಯಿ, ಮೋಪಿಳ್ಳ, ಶೇಖ್ ಮತ್ತು ಸಯ್ಯದ್ ವರ್ಗಗಳಲ್ಲಿ ಹೊಸದಾಗಿ ಮತಾಂತರಗೊಂಡವರನ್ನು ಸೇರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ತಮಿಳುನಾಡು ಸರ್ಕಾರದ ಈ ನಿಲುವನ್ನು ಮದ್ರಾಸ್ ಹೈಕೋರ್ಟ್ ಪೀಠವು ಕಾನೂನುಬಾಹಿರ ಮತ್ತು ತರ್ಕಬದ್ಧವಲ್ಲದ್ದು ಎಂದು ಸ್ಪಷ್ಟಪಡಿಸಿದೆ. “ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿ ‘ಹಿಂದುಳಿದ ವರ್ಗದ ಮುಸ್ಲಿಂ’ (BCM) ಸ್ಥಾನಮಾನವನ್ನು ಪಡೆಯಲು ಸಾಧ್ಯವಿಲ್ಲ ಎಂದು ನಾವು ನಿರ್ಧರಿಸಿದ್ದೇವೆ. ಧರ್ಮ ಬದಲಾಯಿಸಿದ ವ್ಯಕ್ತಿಯು ಕೇವಲ ಮುಸ್ಲಿಂ ಆಗುತ್ತಾರೆಯೇ ಹೊರತು, ಅವರು ಯಾವುದೇ ವಿಶೇಷ ವರ್ಗಕ್ಕೆ ಸೇರುವುದಿಲ್ಲ” ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ರಾಜ್ಯ ಸರ್ಕಾರವು ಸೂಚಿಸಿರುವ ಏಳು ವಿಶೇಷ ಹಿಂದುಳಿದ ಮುಸ್ಲಿಂ ವರ್ಗಗಳಾದ ಅನ್ಸಾರ್, ದಖ್ಖನಿ ಮುಸ್ಲಿಂಗಳು, ದುಬೆಕುಲ, ಲಬ್ಬೈ, ಮಾಪಿಳ್ಳೈ, ಶೇಖ್ ಮತ್ತು ಸೈಯದ್ ಸಮುದಾಯಗಳಲ್ಲಿ, ಹೊಸದಾಗಿ ಮತಾಂತರಗೊಂಡವರನ್ನು ಸದಸ್ಯರೆಂದು ಪರಿಗಣಿಸಲು ಸಾಧ್ಯವಿಲ್ಲ. ಆದ್ದರಿಂದ ಅವರು ಆ ವರ್ಗದ ಅಡಿಯಲ್ಲಿ ಮೀಸಲಾತಿ ಪಡೆಯಲು ಅರ್ಹರಲ್ಲ ಎಂದು ನ್ಯಾಯಾಲಯವು ತೀರ್ಪು ನೀಡಿದೆ.

ಜುಲೈ 2008ರಲ್ಲಿ ಹೊರಡಿಸಲಾದ ಸರ್ಕಾರಿ ಆದೇಶದ ಮೂಲಕ, ತಮಿಳುನಾಡಿನ ಮೇಲೆ ತಿಳಿಸಲಾದ ಏಳು ಮುಸ್ಲಿಂ ಸಮುದಾಯಗಳನ್ನು ವಿಶೇಷ BCM ವರ್ಗದಲ್ಲಿ ಸೇರಿಸಲಾಗಿತ್ತು. ಆದರೆ, ಇತರೆ ಸಮುದಾಯಗಳಿಂದ ಇಸ್ಲಾಂಗೆ ಮತಾಂತರಗೊಂಡವರಿಗೂ ಈ ಪ್ರಮಾಣಪತ್ರಗಳನ್ನು ನೀಡಬೇಕೆಂಬ 2024ರ ಸರ್ಕಾರದ ನಿರ್ಧಾರವು ಕಾನೂನುಬಾಹಿರ ಎಂದು ಹೈಕೋರ್ಟ್ ತೀರ್ಪು ನೀಡಿರುವುದು ತಮಿಳುನಾಡು ಸರ್ಕಾರಕ್ಕೆ ಹಿನ್ನಡೆಯಾಗಿದೆ.

2008ರ ಜುಲೈನಲ್ಲಿ ಹೊರಡಿಸಿದ ಆದೇಶದ ಮೂಲಕ ಈ ಏಳು ಮುಸ್ಲಿಂ ಸಮುದಾಯಗಳನ್ನು BCM ವರ್ಗಕ್ಕೆ ಸೇರಿಸಲಾಗಿತ್ತು. ಆದರೆ 2024ರ ಹೊಸ ಆದೇಶದಂತೆ ಇತರ ವರ್ಗಗಳಿಂದ ಮತಾಂತರಗೊಂಡವರಿಗೆ ಸಹ ಈ ಸೌಲಭ್ಯ ನೀಡುವ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ ಅಮಾನ್ಯವೆಂದು ಘೋಷಿಸಿದೆ

ಎಲ್ಲರಿಗೂ ಶುಭ ಮುಂಜಾನೆ
27/06/2026

ಎಲ್ಲರಿಗೂ ಶುಭ ಮುಂಜಾನೆ

ಬಾದಾಮಿ 👆👍     #ಬಾದಾಮಿ  #ಬಾಗಲಕೋಟೆ  #ಅಮೀನಗಡ
26/06/2026

ಬಾದಾಮಿ 👆👍
#ಬಾದಾಮಿ #ಬಾಗಲಕೋಟೆ #ಅಮೀನಗಡ

Address

W. No 01 Aminagad
Bagalkot
587112

Website

Alerts

Be the first to know and let us send you an email when Aj creator posts news and promotions. Your email address will not be used for any other purpose, and you can unsubscribe at any time.

Share

Category