08/06/2026
Restless journey
ದೂರದ ಹಾದಿ, ಸುಸ್ತಾಗದ ಮನಸ್ಸು. 🌿 8 ಜಿಲ್ಲೆ ಗಳು
ಕಳೆದ ಎರಡು ತಿಂಗಳಲ್ಲಿ 9,000 ಕಿ.ಮೀ ಪ್ರಯಾಣ,
ಪ್ರತಿ ತಿರುವೂ ಒಂದು ಸುಂದರ ಪಾಠ. ಹೊಸ ಮಂದಿ, ವಿಭಿನ್ನ ಆಹಾರ ಶೈಲಿ, ಬದಲಾದ ಗಾಳಿ, ಕನ್ನಡದ ಭಿನ್ನ ಉಪಭಾಷೆಗಳು, ಅಜ್ಞಾತ ತಾಣಗಳು, ಆಯಾ ಭಾಗದ ದೈವ ದೇವರುಗಳು ಮತ್ತು ಹರಕೆ ಹಬ್ಬಗಳು... ಹೀಗೆ ಹಲವಾರು ವಿಚಾರಗಳನ್ನು ಕಣ್ತುಂಬಿಕೊಂಡೆ. ಈ ಅನುಭವದ ಸಿಹಿಯನ್ನು ಹಂಚಿಕೊಳ್ಳುವುದಕ್ಕಿಂತ ಆಸ್ವಾದಿಸುವುದೇ ಹೆಚ್ಚು!
ನನ್ನ EV ವಾಹನದ ಓಡೋಮೀಟರ್ ಇದೀಗ 1 ವರ್ಷಕ್ಕೆ 40,000 ಕಿ.ಮೀ ತಲುಪುವ ಹಂತದಲ್ಲಿದೆ. ಹೆಚ್ಚೇನೂ ಹೇಳಲಾರೆ, ಮತ್ತಷ್ಟು ಸಾಗುವುದು ಉಳಿದಿದೆ... ನಿಂತ ನೀರಾಗದೆ ಸಾಗುತ್ತಲೇ ಇರುವೆ, ಕಲಿಕೆಗೆ ಬಹಳಷ್ಟಿದೆ..
KarnatakaDiaries Explorer"