SLJ TV

SLJ TV SLJTV KANNADA

13/05/2026

ಗೋಕಾಕ ನಗರದ ಹೊರವಲಯದ ಬಾಸ್ಕೋ ಕಾರ್ ಸರ್ವೀಸ್ ಸೆಂಟರ್ ಹತ್ತಿರ ಬೀರುಗಾಳಿಗೆ ಧರೆಗೆ ಉರುಳಿದ ಬ್ಯಾನರ್ ಟೀ ಪೋಲ್...!

ಧಾರಾಕಾರ ಮಳೆ ಧರೆಗುರುಳಿದ ಜಾಹಿರಾತು ಫಲಕಗೋಕಾಕ: ನಿಗಿ ನಿಗಿ ಕೆಂಡವಾಗಿದ್ದ ಗೋಕಾಕ ನಗರಕ್ಕೆ ಬುಧವಾರ ಸಂಜೆ ಸುಮಾರು ೧ಗಂಟೆಗೂ ಹೆಚ್ಚು ಕಾಲ ಧಾರಾ...
13/05/2026

ಧಾರಾಕಾರ ಮಳೆ ಧರೆಗುರುಳಿದ ಜಾಹಿರಾತು ಫಲಕ
ಗೋಕಾಕ: ನಿಗಿ ನಿಗಿ ಕೆಂಡವಾಗಿದ್ದ ಗೋಕಾಕ ನಗರಕ್ಕೆ ಬುಧವಾರ ಸಂಜೆ ಸುಮಾರು ೧ಗಂಟೆಗೂ ಹೆಚ್ಚು ಕಾಲ ಧಾರಾಕಾರ ಗಾಳಿ ಮಳೆ ಸುರಿದಿದೆ.
ನಗರದ ಪ್ರವೇಶದಲ್ಲಿರುವ ಶಿವಾಜಿ ವೃತ್ತದಲ್ಲಿ (S4 Hospital) ಧಾರಾಕಾರ ಗಾಳಿ ಮಳೆಗೆ ರಸ್ತೆಯ ಡಿವೈಡರಗೆ ಅಳವಢಿಸಿದ್ದ ಬೃಹತ್ ಜಾಹಿರಾತು ಫಲಕ ಮುರಿದು ಬಿದ್ದಿದೆ. ಜಾರಹಿರಾತು ಫಲಕ ಮುರಿದ ಪರಿಣಾಮ ಅದರ ಪಕ್ಕದಲ್ಲೆ ಇದ್ದ ೩೩ಕೆವಿ ವಿದ್ಯುತ್ ಕಂಬಕ್ಕೆ ಹಾನಿಯುಂಟಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಗೋಕಾಕ ನಗರ ಅಷ್ಟೇಯಲ್ಲದೆ ತಾಲೂಕಿನ ವಿವಿಧೆಡೆ ಭರ್ಜರಿ ಮಳೆ ಸುರಿದಿದ್ದು ಕೆಲವೆಡೆ ಮರಗಳು ಧರೆಗುರುಳಿವೆ. ಬಿಸಿಲಿನ ಬೆಗೆಯಿಂದ ತತ್ತರಿಸಿದ ಜನತೆಗೆ ಮಳೆ ತಂಪೆರೆದಿದೆ.

ಇಂದು ಗೋಕಾಕ, ಹುಕ್ಕೇರಿ ತಾಲೂಕು ಹಾಗೂ ಬೆಳಗಾವಿ ನಗರದ ವಿವಿಧೆಡೆ ನಡೆದ ನಾಮಕರಣ ಮತ್ತು ಮದುವೆ ಸಮಾರಂಭಗಳಲ್ಲಿ ಆತ್ಮೀಯರ ಆಹ್ವಾನದ ಮೇರೆಗೆ ಭಾಗವಹ...
13/05/2026

ಇಂದು ಗೋಕಾಕ, ಹುಕ್ಕೇರಿ ತಾಲೂಕು ಹಾಗೂ ಬೆಳಗಾವಿ ನಗರದ ವಿವಿಧೆಡೆ ನಡೆದ ನಾಮಕರಣ ಮತ್ತು ಮದುವೆ ಸಮಾರಂಭಗಳಲ್ಲಿ ಆತ್ಮೀಯರ ಆಹ್ವಾನದ ಮೇರೆಗೆ ಭಾಗವಹಿಸಿ, ನವ ದಂಪತಿಗಳು ಹಾಗೂ ಕುಟುಂಬಸ್ಥರಿಗೆ ಶುಭಾಶಯಗಳನ್ನು ಕೋರಲಾಯಿತು.

ಹುಬ್ಬಳ್ಳಿಯಿಂದ ವಿಜಯಪುರಕ್ಕೆ ಚಲಿಸುವ ರೈಲುಗಳು ಇನ್ಮುಂದೆ ಕಾಯಂ; ಟಿಕೆಟ್ ದರ ಶೇ.25-ಶೇ.30ರಷ್ಟು ಇಳಿಕೆಹುಬ್ಬಳ್ಳಿಯಿಂದ ಯೋಗ ನಗರಿ ಋಷಿಕೇಶ್‌ ...
13/05/2026

ಹುಬ್ಬಳ್ಳಿಯಿಂದ ವಿಜಯಪುರಕ್ಕೆ ಚಲಿಸುವ ರೈಲುಗಳು ಇನ್ಮುಂದೆ ಕಾಯಂ; ಟಿಕೆಟ್ ದರ ಶೇ.25-ಶೇ.30ರಷ್ಟು ಇಳಿಕೆ

ಹುಬ್ಬಳ್ಳಿಯಿಂದ ಯೋಗ ನಗರಿ ಋಷಿಕೇಶ್‌ ಮತ್ತು ವಿಜಯಪುರಕ್ಕೆ ಸಂಚರಿಸುವ ಮೂರು ವಿಶೇಷ ರೈಲುಗಳನ್ನು ಕಾಯಂಗೊಳಿಸಲಾಗಿದೆ. ಇದರಿಂದಾಗಿ ಟಿಕೆಟ್ ದರಗಳು ಶೇ. 25-30 ರಷ್ಟು ಕಡಿಮೆಯಾಗಲಿದ್ದು, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಹುಬ್ಬಳ್ಳಿಯಿಂದ ಸಂಚರಿಸುವ ಮೂರು ರೈಲುಗಳು
ಹುಬ್ಬಳ್ಳಿ-ಯೋಗ ನಗರಿ ಋಷಿಕೇಶ್‌ ಮಧ್ಯೆ ಸಂಚರಿಸುವ ರೈಲು ಸೇರಿದಂತೆ ಮೂರು ವಿಶೇಷ ರೈಲುಗಳನ್ನು ಕಾಯಂಗೊಳಿಸಿ ಸೋಮವಾರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಸಿರು ನಿಶಾನೆ ತೋರಿಸಿದರು.

ಕಾಯಂ ರೈಲುಗಳ ಮಾಹಿತಿ
ಈ ಮೊದಲು ವಿಶೇಷ ರೈಲುಗಳಾಗಿ ಸಂಚರಿಸುತ್ತಿದ್ದ ಎಸ್‌ಎಸ್‌ಎಸ್‌ ಹುಬ್ಬಳ್ಳಿ- ಯೋಗನಗರಿ ಋಷಿಕೇಶ್‌- ಎಸ್‌ಎಸ್‌ಎಸ್‌ ಹುಬ್ಬಳ್ಳಿ (ಟ್ರೈನ್‌ ಸಂಖ್ಯೆ- 17363/64) ವೀಕ್ಲಿ ಎಕ್ಸ್‌ಪ್ರೆಸ್‌, ಎಸ್‌ಎಸ್‌ಎಸ್‌ ಹುಬ್ಬಳ್ಳಿ-ವಿಜಯಪುರ-ಎಸ್‌ಎಸ್‌ಎಸ್‌ ಹುಬ್ಬಳ್ಳಿ (ಸಂಖ್ಯೆ 56919/20) ಪ್ಯಾಸೆಂಜರ್‌, ಎಸ್‌ಎಸ್‌ಎಸ್‌ ಹುಬ್ಬಳ್ಳಿ-ವಿಜಯಪುರ ಎಸ್‌ಎಸ್‌ಎಸ್‌ ಹುಬ್ಬಳ್ಳಿ ಮೆಮೂ (ಸಂಖ್ಯೆ- 66501/02) ರೈಲುಗಳನ್ನು ಕಾಯಂ ಆಗಿ ಸಂಚರಿಸಲಿವೆ.

ಶೇ.25ರಿಂದ 30ರಷ್ಟು ಇಳಿಕೆ
ಈ ವೇಳೆ ಮಾತನಾಡಿದ ಕೇಂದ್ರ ಸಚಿವರು, ವಿಶೇಷ ರೈಲುಗಳು ನಿರಂತರವಾಗಿ ಸಂಚರಿಸಲಿವೆ. ಇದರಿಂದ ರಜಾ ದಿನಗಳಲ್ಲಿ ಟಿಕೆಟ್‌ ಅಭಾವ ತಗ್ಗಲಿದೆ. ಟಿಕೆಟ್ ದರದಲ್ಲೂ ಸುಮಾರು ಶೇ.25ರಿಂದ 30ರಷ್ಟು ಇಳಿಕೆಯಾಗಲಿದೆ. ಇದರಿಂದ ಪ್ರಯಾಣಿಕರಿಗೆ ಲಾಭವಾಗಲಿದೆ.

ಪ್ರಯಾಣಿಕರಿಗೆ ಅನುಕೂಲ
ಈ ರೈಲುಗಳ ಓಡಾಟದಿಂದ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕೊಪ್ಪಳ, ವಿಜಯನಗರ, ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈ ವೇಳೆ ನೈಋತ್ಯ ರೈಲ್ವೆ ವಲಯದ ಮಹಾಪ್ರಬಂಧಕ ಪಿ. ಅನಂತ, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ, ಸೇರಿದಂತೆ ಇನ್ನಿತರೆ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.

ಕೈಗೆಟಕುವ ದರದಲ್ಲಿ ಪ್ರಯಾಣ
ರೈಲುಗಳ ನಿಯಮಿತ ಸೇವೆಯಿಂದಾಗಿ ಪ್ರಯಾಣಿಕರಿಗೆ ಆರ್ಥಿಕವಾಗಿಯೂ ದೊಡ್ಡ ಲಾಭವಾಗಲಿದೆ. ಸಾಮಾನ್ಯ ದರ್ಜೆಯ ಪ್ರಯಾಣಿಕರಿಗೆ ಸೂಪರ್‌ಫಾಸ್ಟ್ ಹೆಚ್ಚುವರಿ ಶುಲ್ಕವಿರುವುದಿಲ್ಲ. ಮೀಸಲು ದರ್ಜೆಯ ಟಿಕೆಟ್ ದರದಲ್ಲಿ ಸುಮಾರು 30% ರಷ್ಟು ಕಡಿತವಾಗಲಿದ್ದು, ಪ್ರಯಾಣವು ಅತ್ಯಂತ ಕೈಗೆಟಕುವ ದರದಲ್ಲಿ ಸಿಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಶಿವಾಜಿ ಸರ್ಕಲ್ S4 ಹತ್ತಿರ ನಗರಸಭೆ ಬೇಗನೆ ತೇರವು ಗೋಳಸಿ ಅಪಘಾತ ಆಗುವ ಮುಂಚೆ
13/05/2026

ಶಿವಾಜಿ ಸರ್ಕಲ್ S4 ಹತ್ತಿರ ನಗರಸಭೆ ಬೇಗನೆ ತೇರವು ಗೋಳಸಿ ಅಪಘಾತ ಆಗುವ ಮುಂಚೆ

Marriage function of siblings of Shri Ramanagouda Hatti Additional SP at Bijapur.
13/05/2026

Marriage function of siblings of Shri Ramanagouda Hatti Additional SP at Bijapur.

ಆತ್ಮೀಯರು, ಸಚಿವ ಸಂಪುಟದ ಸಹೋದ್ಯೋಗಿಗಳು ಆದ ಶ್ರೀ ಶಿವರಾಜ ತಂಗಡಗಿ ಅವರ ಪುತ್ರ ಶ್ರೀ ಶಶಾಂಕ್ ಅವರ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಪಾಲ್...
13/05/2026

ಆತ್ಮೀಯರು, ಸಚಿವ ಸಂಪುಟದ ಸಹೋದ್ಯೋಗಿಗಳು ಆದ ಶ್ರೀ ಶಿವರಾಜ ತಂಗಡಗಿ ಅವರ ಪುತ್ರ ಶ್ರೀ ಶಶಾಂಕ್ ಅವರ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಸೆಮಣೆ ಏರಲಿರುವ ನೂತನ ಜೋಡಿಗೆ ಶುಭ ಹಾರೈಸಿ ಆಶೀರ್ವದಿಸಿದರು.

ಸಾವಳಗಿ: ಗೋಕಾಕ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ದೇವಿಯ ಜಾತ್ರಾಮಹೋತ್ಸವವು ಭಕ್ತಿಭಾವ ಹಾಗೂ ಸಂಭ್ರಮದಿಂದ ನಡೆಯಿತು. ಗ್ರಾಮದ ವಿವಿ...
13/05/2026

ಸಾವಳಗಿ: ಗೋಕಾಕ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ದೇವಿಯ ಜಾತ್ರಾಮಹೋತ್ಸವವು ಭಕ್ತಿಭಾವ ಹಾಗೂ ಸಂಭ್ರಮದಿಂದ ನಡೆಯಿತು. ಗ್ರಾಮದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಜಾತ್ರೆಯ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು, ಭಜನೆ, ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಗ್ರಾಮದ ಹಿರಿಯರು, ಯುವಕರು ಹಾಗೂ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿ ಜಾತ್ರೆಗೆ ಮೆರುಗು ತಂದರು.
ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಭಕ್ತರಿಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿತ್ತು.

13/05/2026

ಇವತ್ತು ಮಹಾನಗರ ಪಾಲಿಕೆ ಸಾಮಾನ್ಯ ಸಭೆ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮಹಾನಗರ ಪಾಲಿಕೆ ಮೇಯರ್ ಪ್ರೀತಿ ಕಾಮಕರ್ ಅವರಿಗೆ ಕರವೇ ವತಿಯಿಂದ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಹಾಗೂ ಮಹಾಜನ್ ಆಯೋಗದ ವರದಿ ಜಾರಿಗೆಗೊಳಿಸಲು ಎಚ್ಚರಿಕೆ ನೀಡಲಾಯಿತು

JITO Harshotsav at BELAGAVI An excellent talks by various speakers across INDIA were organised by JITO Belagavi.
13/05/2026

JITO Harshotsav at BELAGAVI
An excellent talks by various speakers across INDIA were organised by JITO Belagavi.

Address

Gokak

Telephone

+918722796002

Website

Alerts

Be the first to know and let us send you an email when SLJ TV posts news and promotions. Your email address will not be used for any other purpose, and you can unsubscribe at any time.

Share

Category