Shivashankar Banagar Photography

Shivashankar Banagar Photography Hampi my lovely terra

ʼ ಎಮ್ಮವರು ಬೆಸಗೊಂಡರೆ ಶುಭಲಗ್ನವೆನ್ನಿರಯ್ಯ  ʼವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲ...
04/01/2026

ʼ ಎಮ್ಮವರು ಬೆಸಗೊಂಡರೆ ಶುಭಲಗ್ನವೆನ್ನಿರಯ್ಯ ʼ

ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿಂದು 40 ವರ್ಷಗಳ ಹಿಂದೆ ಎಸ್‌ ಎಸ್‌ ಎಲ್‌ ಸಿ ವ್ಯಾಸಂಗ ಮಾಡಿದ ನಾವೆಲ್ಲಾ ಒಂದೆಡೆ ಸೇರಿ ಗುರುಗಳಿಗೆ ಸನ್ಮಾನಿಸಿ ವಂದಿಸಿದೆವು. ಈ ನಡುವೆ ಕಾಲವಾದ ಕೆಲ ಗುರುಗಳಿಗೆ ಗೆಳೆಯರನ್ನು ನೆನೆದು ಶ್ರದ್ಧಾಂಜಲಿ ಅರ್ಪಿಸಿದೆವು.

ಅಣ್ಣ ಬಸವಣ್ಣ ಮಾತಿನಂತೆ ನಮ್ಮವರೆಲ್ಲಾ ಒಂದಡೆ ಸೇರಿದ್ದು ಶುಭಲಗ್ನವಾಗಿತ್ತು.
ಕೆಲವರು ಗೆಳೆಯ- ಗೆಳೆಯ ಗೆಳತಿಯರ ನಡುವೆ ಸಂಪರ್ಕವಿತ್ತಾದರೂ ಹಲವರಿಗೆ ಈ ಭಾಗ್ಯವಿರಲಿಲ್ಲ.
ಈ ಸಮ್ಮೀಲನ ಕಾರ್ಯಕ್ರಮ ಈ ಕೊರತೆಯನ್ನು ದೂರ ಮಾಡಿತು.
ಸುದೀರ್ಘ ನಲವತ್ತು ವರ್ಷಗಳ ತರುವಾಯ ನಮ್ಮ ಚಿತ್ತ ಬಿತ್ತಿಯಲ್ಲಿ ಅಂದು-ಇಂದು ಮುಖಗಳು ದಾಖಲಾತಿ ನಡೆದವು. ಪುನರ್ ಮಿಲನದಿಂದ ; ಮನಸ್ಸುಗಳು ಆಹ್ಲಾದದಿಂದ ಮಿಂದೆದ್ದವು.ಒಳಗೇನೇ ಬೇಗುದಿ ಸಂಕಷ್ಟಗಳಿದ್ದರೂ ತೋರ್ಪಡಿಸದೇ ಮಾತುಗಳು ವಿನಿಮಯವಾದವು.
ಕಿಶೋರ ಸ್ಥಿತಿಯಿಂದ ತಾರುಣ್ಯ ಕ್ಕೆ ಕಾಲಿಟ್ಟದ ಆ ದಿನಗಳು- ಬದುಕಿನ ಜಂಜಡ….ಯಶೋಗಾಥೆಗಳು ಈ ದಿನಗಳು ಸ್ವಲ್ಪ ಮಟ್ಟಿಗೆ ಪರಿಚಯವಾದವು.
ಬಹುಜನರ ಮಕ್ಕಳು ಉತ್ತಮ ಶಿಕ್ಷಣ ಸಿಕ್ಕು ಉನ್ನತಕ್ಕೇರಿದ ಸಂಗತಿ ಪರಿಚಯದಲ್ಲಿ ವ್ಯಕ್ತ ವಾಯ್ತು.
ಶಿಕ್ಷಕರಿಗೆ ನಮಗೂ ಅತೀವ ಆನಂದವಾಗಿದೆ. ಅವರ ಪಾದಪೂಜೆ ಮಾಡಿದ್ದು ನಮ್ಮ ಶರಣ ಸಂಸ್ಕೃತಿಯ ಭಾಗವಾಗಿದೆ.ಇದು ಉಳಿದವರಿಗೆ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದೆ.
ಊಟ ರುಚಿಕರವಾಗಿತ್ತು. ಸಿದ್ಧತೆ ಅಚ್ಚುಕಟ್ಟಾಗಿತ್ತು. ಇದರ ಹಿಂದಿನ ಪರಿಶ್ರಮಕ್ಕೆ ಕಾರಣವಾದವರಿಗೆಲ್ಲಾ ಅನಂತ ಧನ್ಯವಾದಗಳು.
ಅಂತೂ ಬಹುದಿನಗಳ ಆಶಯ ಕೈಗೂಡಿತು. ಕಾರ್ಯಕ್ರಮ ಹಾಜರಾತಿ ನೀಡಿದ ಎಲ್ಲಾ ಗೌರವಾನ್ವಿತ ಸಹಪಾಠಿಗಳಿಗೆ ನನ್ನ ವಂದನೆಗಳು.

Address

Shop No. 1, Pruthvi Complex, KR. Road, Ranipete, Hosapete
Hospet
583201

Telephone

+919448234764

Website

Alerts

Be the first to know and let us send you an email when Shivashankar Banagar Photography posts news and promotions. Your email address will not be used for any other purpose, and you can unsubscribe at any time.

Contact The Business

Send a message to Shivashankar Banagar Photography:

Shortcuts

Share

Category