Mr photography

Mr photography Contact information, map and directions, contact form, opening hours, services, ratings, photos, videos and announcements from Mr photography, Photographer, mangaladevi, Mangalore.

25/12/2018
~^~ଓ.💠ದ್ವಿತೀಯ ದಿನ °ಆರ್ಯ ದೇವಿ💠.ଓ`°ଆ». Second Day °Arya Devi `°ଆ».ವಿದ್ಯುದ್ದಾಮಸಮಪ್ರಭಾಂ ಮೃಗಪತಿಸ್ಕಂಧಸ್ಥಿತಾಂ ಭೀಷಣಾಮ್ ಕನ್ಯಾಭಿಃ ...
11/10/2018

~^~
ଓ.💠ದ್ವಿತೀಯ ದಿನ °ಆರ್ಯ ದೇವಿ💠.ଓ
`°ଆ». Second Day °Arya Devi `°ଆ».

ವಿದ್ಯುದ್ದಾಮಸಮಪ್ರಭಾಂ ಮೃಗಪತಿಸ್ಕಂಧಸ್ಥಿತಾಂ ಭೀಷಣಾಮ್ ಕನ್ಯಾಭಿಃ ಕರವಾಲಖೇಟವಿಲಸತ್ ಹಸ್ತಾಭಿರಾಸೇವಿತಾಮ್। ಹಸ್ತೈಶ್ಚಕ್ರಗದಾಸಿಶಂಖ ವಿಶಿಖಾಂಶ್ಚಾಪಂ ಗುಣಂ ತರ್ಜನೀಮ್ ಬಿಭ್ರಾಣಾಮನಲಾತ್ಮಿಕಾಂ ಶಶಿಧರಾಂ ಆರ್ಯಾಂ ತ್ರಿನೇತ್ರಾಂ ಭಜೇ ॥

ಶರನ್ನವರಾತ್ರಿಯ ಇಂದಿನ ಎರಡನೇಯ ದಿನ ಆರ್ಯಾದೇವಿ ಅಲಂಕಾರದಲ್ಲಿ ವಿರಾಜಮಾನಳಾದ ಶ್ರೀ ದೇವಿ.
Mother will be worshipped in the form of 'Àrya on second day of Navaratri

ನವರಾತ್ರಿಯ ಪರ್ವಕಾಲದ ಇಂದಿನ ದ್ವಿತೀಯ ದಿನವಾದ ಬಿದಿಗೆಯ ಗುರುವಾರದಂದು ಪ್ರಜಾಜನಾದಿ ಗಳನ್ನು ಸಲಹುವ ಆರ್ಯಾ ದೇವಿಯಾಗಿ ಸರ್ವಾಲಂಕೃತಳಾದ ಶ್ರೀ ದೇವಿ, ವಿಶ್ವವನ್ನೇ ಪರಿಪಾಲಿಸುವ ಮಹಿಮಾನ್ವಿತೆಯಾಗಿ *ಆರ್ಯಾ ಆತ್ಮಾಂ ಜಗತಃ ತುಸ್ಥುಷಶ್ವ* ಎಂಬ ಉಕ್ತಿಯಂತೆ ಜಗಚ್ಚಕ್ಷುವಿನಂತೆ ಆತ್ಮ ಸ್ವರೂಪಳಾಗಿ ಜಗತ್ತಿಗೆ ಚೈತನ್ಯ ನೀಡುವವಳಾಗಿದ್ದಾಳೆ.
'ಆಕಾಶ ನೀಲಿ' ಬಣ್ಣದ ಸೀರೆಯನ್ನು ಧರಿಸಿ ಅಭಯ ವರದ ಹಸ್ತಳಾಗಿ ಚಕ್ರ-ಗದಾ ಪಾಣಿಯಾಗಿ ಸರ್ವಾಲಂಕೃತಳಾದ ಶ್ರೀ ದೇವಿಯು ಆರ್ಯಾಲಂಕಾರದಲ್ಲಿ ಸಿಂಹಾಸನಸ್ಥಿತಳಾಗಿರುವಳು.😍

ಪ್ರಾಯಶಃ ಆರ್ಯ ಎಂದರೆ 'ಶ್ರೇಷ್ಟ' ಎಂದರ್ಥ. ಕಲ್ಪೋಕ್ತದ ಪ್ರಕಾರ ಶಕ್ತಿಯ ಉಪಾಸನೆಯಲ್ಲಿ 'ಸಾತ್ವಿಕ,ರಾಜಸ,ತಾಮಸ' ಎಂಬ ಮೂರು ಸ್ವರೂಪಗಳಿದ್ದು ಇದರಲ್ಲಿ 'ರಾಜಸ' ಉಪಾಸನಾ ದೇವತೆಯೇ 'ಆರ್ಯೆ'.
ಸೃಷ್ಟಿಗೆ ಮಾತೃ ಸ್ವರೂಪವಾಗಿ ಭೂಮಂಡಲವನ್ನೇ ತನ್ನ ಸಾಮ್ರಾಜ್ಯವನ್ನಾಗಿಸಿ ಇಲ್ಲಿನ ಸರ್ವರನ್ನೂ ತನ್ನ ಪ್ರಜೆಗಳಂತೆ ಕಂಡು, ಆಚಂದ್ರಾರ್ಕ ಸಲಹುವ ದುರ್ಗೆಯ ಅಂಶವೇ ಆರ್ಯಾದೇವಿ. ಆತ್ಮಬಲ ನೀಡುವವಳೆಂದು ಇಚ್ಛಾಶಕ್ತಿಯನ್ನುಂಟು ಮಾಡುವವಳೆಂದೂ ವಿಶ್ವವೇ ದೇವಿಯ ಅಧೀನದಲ್ಲಿದ್ದು ಸರ್ವತ್ರವೂ ಆಕೆಯಿಂದ ಅನುಗ್ರಹಿಸಲ್ಪಡುತ್ತದೆ.

~^~🔹⋄°ಪ್ರಥಮ ದಿನ°ದುರ್ಗಾದೇವಿ°⋄🔹🔸.‹First Day   °Durga Devi°›.🔸ಶಂಖಾರಿಚಾಪಶರಭಿನ್ನಕರಾಂ ತ್ರಿನೇತ್ರಾಂ ತಿಗ್ಮೇತರಾಂಶುಕಲಯಾಂ ವಿಲಸತ್ಕಿರೀ...
10/10/2018

~^~
🔹⋄°ಪ್ರಥಮ ದಿನ°ದುರ್ಗಾದೇವಿ°⋄🔹
🔸.‹First Day °Durga Devi°›.🔸

ಶಂಖಾರಿಚಾಪಶರಭಿನ್ನಕರಾಂ ತ್ರಿನೇತ್ರಾಂ ತಿಗ್ಮೇತರಾಂಶುಕಲಯಾಂ ವಿಲಸತ್ಕಿರೀಟಾಮ್ । ಸಿಂಹಸ್ಥಿತಾಂ ಸಸುರಸಿದ್ಧನತಾಂ ಚ ದುರ್ಗಾಂ ದೂರ್ವಾನಿಭಾಂ ದುರಿತವರ್ಗಹರಾಂ ನಮಾಮಿ ॥

ಇಂದಿನ ಆಶ್ವಿಜ ಶುಕ್ಲ ಪಾಡ್ಯದಿಂದ ಶ್ರೀ ದೇವಿಯ ವಿವಿಧ ರೂಪಗಳ ಆರಾಧನೆ ಪ್ರಾರಂಭವಾಗುತ್ತದೆ.
ನವರಾತ್ರಿಯ ಮೊದಲ ದಿನ ದುರ್ಗಾದೇವಿ ಅಲಂಕಾರದಲ್ಲಿ ಶೋಭಿತಳಾಗಿರುವ ಶ್ರೀ ದೇವಿ.

Goddess will be worshipped in the form of Durga on the first day of Navaratri.

ಶರನ್ನವರಾತ್ರಿಯ ಇಂದಿನ ಪ್ರಥಮ ದಿನದ ಪಾಡ್ಯದಂದು ಶ್ರೀ ಮಂಗಳಾದೇವಿ ಅಮ್ಮನವರಿಗೆ *ದುರ್ಗಾ ದೇವಿ*ಯ ಅಲಂಕಾರ. ವೈಭವೋಪೇತ ಅಲಂಕಾರದಿಂದ ರಾಜಸ ಸ್ವರೂಪಳಾಗಿ ಕೆಂಪು ಬಣ್ಣದ ಸೀರೆಯನ್ನು ತೊಟ್ಟು, ಚತುರ್ಭುಜೆಯಾಗಿ ಅಭಯ-ವರದ ಹಸ್ತಳಾದ ದೇವಿಯು ಪಾರ್ಶ್ವ ಹಸ್ತದಲ್ಲಿ ಖಡ್ಗವನ್ನು ಹಾಗು ವಾಮ ಹಸ್ತದಲ್ಲಿ ಗದೆಯನ್ನು ಪಿಡಿದು, ತ್ರಿಶೂಲ ಧಾರಿಣಿಯಾಗಿ ವೀರತ್ವದಿಂದ ಧನಸ್ಸು ಬಾಣವನ್ನು ಧರಿಸಿ ಸಿಂಹವನ್ನೇರಿ ಅಸುರ'ರೊಡನೆ ಯುದ್ಧಕ್ಕೆ ಸನ್ನದಳಾಗಿ ಹೊರಟ ದುರ್ಗೆಯಾಗಿ ಶ್ರೀ ದೇವಿಯು ಅಲಂಕೃತಳಾಗಿರುವಳು.😍

ದಯಾರೂಪೇ ದಯಾದೃಷ್ಟೇ ದಯಾರ್ದ್ರೇ
ದುಃಖ ಮೋಚನೀ ಸರ್ವಾಪತ್ತಾರಿಕೇ ದುರ್ಗೇ ಜಗದ್ಧಾತ್ರಿ ನಮೋಸ್ತುತೇ.
ಪ್ರಥಮವಾಗಿ ದೇವಿಯಲ್ಲಿ ನಮ್ಮ ಅಭೀಷ್ಟಗಳೆಲ್ಲಾ ನೆರವೇರಲಿ ಎಂದು ಪ್ರಾರ್ಥಿಸುತ್ತಾ ಸರ್ವರಿಗೂ ನವರಾತ್ರಿಯ ಶುಭ ಹಾರೈಕೆಗಳು👏

*ನವದುರ್ಗಾ ಕಲ್ಪೋಕ್ತದ* ಪ್ರಕಾರ ಸೃಷ್ಟಿ ಸ್ಥಿತಿ ಲಯಗಳಿಗೆ ಕಾರಣೇ ಭೂತಳಾಗಿ ನಿರ್ವ್ಯಾಜ್ಯ ಭಕ್ತಿಯಿಂದ ನಂಬಿ ಬಂದವರ ದುರ್ಗತಿಗಳನ್ನು ಕಳೆದು ಪುನಶ್ಚೇತನಗೊಳಿಸಿ ರಕ್ಷಿಸುವ ದೇವಿಯ ಪ್ರಥಮ ಸ್ವರೂಪವೇ ದುರ್ಗಾದೇವಿ.

ತಾಂ ದುರ್ಗಾಂ ದುರ್ಗಮಾಂ ದೇವಿಂ ದುರಾಚಾರ ವಿಘಾತಿನಿ ನಮಾಮಿ ಭವಭೀತೋಹಂ ಸಂಸಾರಣ್ಯವತಾರಿಣೀ.
ದೈತ್ಯ ನಾಶಾರ್ಥ ವಚನೋ ದಕಾರಃ ಪರಿಕೀರ್ತಿತಃ |
ಉಕಾರೋ ವಿಘ್ನ ನಾಶಸ್ಯ ವಾಚಕೋ ವೇದ ಸಮ್ಮತಃ|
ರೆಫೋ ರೋಗಘ್ನ ವಚನೋ ಗಶ್ಚ ಪಾಪಘ್ನ ವಾಚಕಃ |
ಭಯ ಶತ್ರುಘ್ನ ವಚನ ಶ್ಚಾಕಾರ:ಪರಿಕೀರ್ತಿತಃ |

ದಕಾರ -ದೈತ್ಯ ನಾಶಕ..ಉಕಾರ -ವಿಘ್ನ ನಾಶಕ..ರಕಾರ -ರೋಗ ನಿವಾರಕ..ಗಕಾರ -ಪಾಪ ನಾಶಕ..ಹಾಗು ಅಕಾರ -ಭಯ ಶತ್ರು ನಿವಾರಕ.. ಹೀಗೆ ಸರ್ವ ವ್ಯಾಪಕವಳಾದ ಮಹಾಶಕ್ತಿಯೇ ದುರ್ಗಾ.

24/11/2017

Address

Mangaladevi
Mangalore
575001

Alerts

Be the first to know and let us send you an email when Mr photography posts news and promotions. Your email address will not be used for any other purpose, and you can unsubscribe at any time.

Share

Category